ಸ್ನೇಹಕ್ಕಾಗಿ...........,,,,,,,,,,,

Friday, December 11, 2009

ಏನೆಂದು ನಾ ಹೇಳಲಿ ಮಾನವನಾಶೆಗೆ ಕೊನೆ ಏಲ್ಲಿ????

ಮನುಷ್ಯನ ಆಶೆಗಳಿಗೆ ಮಿತಿಯೇ ಇಲ್ಲ ತನ್ನ ನಿತ್ಯ ಜೀವನದಲ್ಲಿ ಅವನಿಗೆ ಬೇಕಾದ ಮೂಲ ಭೂತ ಸೌಕಯಗಳು ದೊರೆತರು ಉತ್ತವಾದ ಜೀವನವನ್ನು ಸಾಗಿಸಲಿಕ್ಕೆ ಅವನು ಮಾಡುವ ಆಶೆಗಳು ಸಾವಿರಾರು, ಊಟ ಸಿಕ್ಕರೆ, ಉತ್ತಮವಾದ ಮನೆ ಹೊಂದುವ ಆಶೆ, ಮನೆ ಸಿಕ್ಕರೆ, ಒಳ್ಳೆಯ ಕೆಲಸ ಹೊಂದುವ ಆಶೆ, ಕೆಲಸ ಸಿಕ್ಕರೆ, ಕಾರು , ಕಾರು ಸಿಕ್ಕರೆ, ???? ಹೀಗೆ ಅವನ ಆಶೆ ಬೆಳೆಯುತ್ತಾ ಸಾಗುತ್ತದೆ. ತನ್ನ ಆಶೆಗಳ ಇಡೆರಿಕೆಗಾಗಿ ಆತ ಬೇರೆ ಬೇರೆ ಅಪಾಯಗಳನ್ನು ಏದುರಿಸುತ್ತಾನೆ, ಬೇರೆ ಬೇರೆ ಉಪಾಯಗಳನ್ನು ಮಾಡುತ್ತಾನೆ. ಮಧ್ಯೆ ಧನ,ಮಾನ,ಸಮಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಇಷ್ಟೆಲ್ಲ ಮಾಡಿದಾಗ ಅವನ ಆಶೆಗಳು ಇಡೆರಿದರೂ ಕೂಡ ಮುಂದೆ ಅವನ ಹೊಸ ಆಶೆಗಳ ಪಟ್ಟಿ ಅಲ್ಲಿಂದಲೇ ಪ್ರಾರಂಬವಾಗುತ್ತದೆ ಅದಕ್ಕೆ ಇರಬೇಕು ಗೌತಮ ಬುದ್ದ ಹೇಳಿದ್ದು``ಆಶೆಯೇ ದುಖಃಕ್ಕೆ ಮೂಲ`` ಎಂದು ಮನುಷ್ಯನಿಗೆ ಆಶೆಗಳಿರಬೇಕು ಆದರೆ ಅದು ಅತಿ ಆಶೆಯಾಗಬಾರದು ತನ್ನಲ್ಲಿರುವುದನ್ನು ಹಂಚಿ ಮತ್ತೋಬ್ಬರಿಗೆ ಸಹಾಯ ಮಾಡುವುದು ಮನುಷ್ಯ ಮುಖ್ಯ ಗುಣವಾಗಬೇಕು ಆವಾಗ ಮಾತ್ರ ಸಮಾಜಕ್ಕೆ ನಾವೋಬ್ಬ ಒಳ್ಳೆಯ ಪ್ರಜೆಗಳಾಗಲಿಕ್ಕೆ ಸಾದ್ಯ ಎಲ್ಲರೊಂದಿಗೆ ಪ್ರತಿ ವಿಶ್ವಾಸದಿಂದಿರಬೇಕು , ಪ್ರತಿಯೊಬ್ಬರನ್ನು ಗೌರವಿಸಬೇಕು ಆವಾಗ ಮಾತ್ರ ಒಂದು ಉತ್ತಮವಾದ ಸಮಾಜ ಕಟ್ಟಲು ಸಾದ್ಯ ಏನಂತಿರಿ???.

Thursday, November 26, 2009

ನಾಳೆಯ ಚಿಂತೆಯಲ್ಲಿ .....,,,,,,,,

ಎವರಿ ಡಾಗ್ ಹ್ಯಾಸ್ ಇಟ್ಸ ಓನ್ ಡೇ


ಎವರಿ ಡೇ ಇಸ್ ನಾಟ್ ಎ ಸಂಡೆ


ಎಂಬಿತ್ಯಾದಿ ವಾಕ್ಯಗಳು ಮನುಷ್ಯನಿಗೆ ಮುಂದೊಂದು ದಿನ ಒಳ್ಳೆಯ ದಿನ ಬರುತ್ತದೆ ಅನ್ನುವುದನ್ನು ಸಾರಿ ಹೇಳುತ್ತವೆ


ಆದರೆ ಮನುಷ್ಯನು ನಾಳೆ ಬರುವ ಆ ಹುಸಿ ಒಳ್ಳೆಯ ದಿನಕ್ಕಾಗಿ ಕಾಯುತ್ತಾ ತಾನಿರುವ ಸದ್ಯದ ದಿನವನ್ನು ಬರೀ ನಾಳೆಯ


ಚಿಂತೆಯಲ್ಲಿಯೇ ಹಾಳು ಮಾಡಿಕೊಳ್ಳುತ್ತಿರುವುದು ಮಾತ್ರ ದೂರಾದೃಷ್ಟಕರ, ನಾಳೆಯ ಚಿಂತೆ ಮಾಡುವುದಕ್ಕಿಂತ


ಇಂದಿನ ಆ ಉತ್ತಮವಾದ ಗಳಿಗೆಯನ್ನು ಉಪಯೋಗಿಸಿಕೊಳ್ಳುವುದು ಮಾತ್ರ ಸತ್ಯ ಸಂಗತಿ. ಏನಂತಿರಿ?????


Monday, August 10, 2009

ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದು ನಮ್ಮನ್ನಗಲಿದ ಆ ಮಹಾನ ಚೇತನಗಳಿಗೆ ಇದೋ ನಮ್ಮ ನಮನ.....,

ಅವು ಸ್ವಾತಂತ್ರ್ಯ ಮೂರ್ವದ ದಿನಗಳು,ನಮ್ಮ ದೇಶ ಬ್ರೀಟಿಷರ ಆಡಳಿತದಲ್ಲಿ ಇತ್ತು,ಭಾರತೀಯರಿಗೆ ತುಂಬಾ ಕಷ್ಟದ ದಿನಗಳು, ಇಡಿ ಭಾರತವನ್ನೆ ತಮ್ಮ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದ ಆಂಗ್ಲರದಬ್ಬಾಳಿಕೆಯ ಕರಿನೆರಳನ್ನು ಉಳಿಸಿ ಹೋದ ದಿನಗಳು, ಭಾರತೀಯರಲ್ಲಿಯ ಸ್ವಾಭಿಮಾನ, ಆತ್ಮಸ್ಥೈರ್ಯವನ್ನುಕಂಗೆಡಿಸಿದ ದಿನಗಳು, ಭಾರತೀಯರು ತಮ್ಮ ದೇಶದ ಪರಂಪರೆ,ಸಂಸ್ಕೃತಿ,ಇತಿಹಾಸವನ್ನು ಬ್ರೀಟಿಷರ ಗುಲಾಮಗಿರಿಯಲ್ಲಿಮರೆತೆಬಿಟ್ಟೆವೇನೋ ? ಅನ್ನುವಷ್ಟರ ಮಟ್ಟಿಗೆ ಕಂಗೆಟ್ಟ ದಿನಗಳು, ಇಂತಹ ಸಂದರ್ಬದಲ್ಲಿ ಭಾರತೀಯರಲ್ಲಿಸ್ವಾತಂತ್ರ್ಯದ ಕಲ್ಪನೆ ಹಾಗೂ ಅದರ ಸಾಕಾರದ ಬಗ್ಗೆ ಅನೇಕ ಮಹಾನ ಣ್ಯರು ಬ್ರೀಟಿಷರ ಕಪಿ ಮುಷ್ಟಿಯಲ್ಲಿಸಿಲುಕಿಹಾಕಿಕೊಂಡು ಮಲಗಿದ್ದ ಭಾರತೀಯರನ್ನು ಬಡಿದೆಬ್ಬಿಸಿದರು. ಸ್ವಾತಂತ್ರ್ಯದ ಒಂದು ಕಲ್ಪನೆಯನ್ನುಭಾರತೀಯಲ್ಲಿ ತುಂಬಿದರು.ಜನರನ್ನೆಲ್ಲ ಜಾಗೃ ನ್ನಾಗಿ ಮಾಡಿದರು, ಇಡೀ ದೇಶದ ತುಂಬೆಲ್ಲ ಸ್ವಾತಂತ್ರ್ಯದ ಕಹಳೆಯನ್ನು ಉದಿದರು. "ಬ್ರೀಟಿಷರೆಭಾರತವನ್ನು ಬಿಟ್ಟು ತೊಲಗಿ" "ಭಾರತ ಮಾತಾಕಿ ಜೈ" ಎಂತೆಲ್ಲ ಘೋಷಣೆಗಳು ಬ್ರೀಟಿಷ ವಿರುದ್ದ ಕೂಗುವಂತೆ ಮಾಡಿದರು, ಮಹಾತ್ಮ ಗಾಂಧಿ,ಜವಾಹರಲಾಲ ನೇಹರು,ವಲ್ಲಭಾಯಿ ಪಟೇಲ,ಸುಬಾಷ ಚಂದ್ರ ಬೋಸ,ಲಾಲ ಲಜಪತರಾಯ್, ಭಗತಸಿಂಗ್ ರಂತ ಮಾಹಾನ ವ್ಯಕ್ತಿಗಳು ತಮ್ಮ ಚಳುವಳಿಗಳ ಮುಖಾಂತರ ಬ್ರೀಟಿಷರ ವಿರುದ್ದ ಸಿಡಿದೆದ್ದರು, ಮಹಾತ್ಮ ಗಾಂಧಿಯವರು "ಉಪ್ಪಿನ ಸತ್ಯಾಗ್ರಹ", "ಅಸಹಕಾರ ಚಳುವಳಿಗಳ" ಳಂತ ಅಹಿಂಸಾತ್ಮಕ ಚಳುವಳಿಗಳಮುಲಕ ಸ್ವಾತಂತ್ರ್ಯ ಪಡೆಯಲು ಜನರನ್ನು ಪ್ರೇರೆಪಿಸಿ ದರು, ಚಳುವಳಿಯಲ್ಲಿ ಅನೇಕ ಜನ ದೇಶದಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಾಪ್ರಣೆಯನ್ನು ಮಾಡಿದರು.
ಭಗತಸಿಂಗ್,ಚಂದ್ರಶೇಖರ ಅಜಾಧ,ಸುಖದೇವ ರಂತ ಕ್ರಾಂತಿಕಾರಿಗಳು ತಮ್ಮ ಚಳುವಳಿಗಳ ಮುಲಕ ಬ್ರೀಟಿಷರವಿರುದ್ದ ಸಿಡಿದೆದ್ದರು, ಅನೇಕ ಜನ ಬ್ರೀಟಿಷರ ಗುಂಡೆಟಿಗೆ ಬಲಿಯಾದರು, ಅನೇಕರನ್ನು ಗಲ್ಲಿಗೆ ಏರಿಸಲಾಯಿತು,
ಅನೇಕ ಜನ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಣೆಯನ್ನ ಮಾಡಿದರು,
ಇಂತಹ ಮಹನಿಯರ ತ್ಯಾಗ ಹಾಗೂ ಬಲಿದಾನದ ಫಲವಾಗಿ 1947 ಅಗಷ್ಟ15 ರಂದು ಬ್ರೀಟಿಷರು ನಮ್ಮದೇಶವನ್ನು ಬಿಟ್ಟು ತೋಲಗಿದರು, ಅಂದು ಭಾರತವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. ಸ್ವಾತಂತ್ರ್ಯಸಂಗ್ರಾಮದಲ್ಲಿ ಮಡಿದು ವೀರ ಮರಣವನ್ನು ಪಡೆದ ನಮ್ಮನ್ನಗಲಿದ ಮಹಾನ್ ಚೇತನಗಳಿಗೆ ಇದೋ ನಮ್ಮ ನಮನ,,,,,

Saturday, July 4, 2009

ಸ್ನೇಹಿತರೇ, ನನ್ನಕೆಲವುಚುಟುಕುಗಳು ನಿಮಗಾಗಿ,,,,,,
ಸ್ನೇಹಿತರೇ,

ನನ್ನ ಕೆಲವು ಚುಟುಕುಗಳು ನಿಮಗಾಗಿ,,,,,,

ತನು - ಮನ
ಅವಳೆಂದಳು
ಪ್ರಿಯಾ, ಬೆರೆಯಲಿಲ್ಲವೇಕೆ
ನನ್ನ ನಿನ್ನ ತನು - ಮನ ?

ಅವನೆಂದ

ಪ್ರಿಯೇ, ಕೊಡಲಿಲ್ಲ ನಿಮ್ಮಪ್ಪ

ನನ್ನ ವರದಕ್ಷಿಣೆ ಹಣ !!

* * * * *
_____________________________________________________________
ನಗ - ಭರ
ಜೋಡಿ ಎತ್ತುಗಳಿಗೂ 'ನೊಗ' ಭಾರ !
ನನ್ನವಳಿಗೆ ನಾನೆಷ್ಟು ಕೊಡಿಸಿದರು ನಗ 'ಬರ' !!

* * * * *
____________________________________________________________
ಸಂಸ್ಕಾರ
ಬಿತ್ತಿದ್ದೇ ಬೇವು !
ಬೇಕೆಂದರೆ ಹೇಗೆ ಮಾವು !!
ಸಹಿಸಿಕೊಳ್ಳಲೇ ಬೇಕು ತಾವು !!!
ಬರುವ ವರೆಗೂ ಸಾವು !!!!
* * * * *
_____________________________________________________________
ಮುಂದ ?
ಅವಳು ನೋಡಿದ ಮೇಲೆ ನನ್ನ ಅಂದ !
ಬಿದ್ದಳು ನನ್ನ ಹಿಂದ !!
ಸದ್ದಿಲ್ಲದೆ ಆಯಿತೊಂದು ಕಂದ !!!
ಮುಂದ ?
ಈಗ ನಾನು ಅವಳ ಹಿಂದ !!!!

* * * * *
_____________________________________________________________
ಮನೋಹರ
ಅವಳು ಮನೋಹರಿ !
ಇವನು ಮನೋಹರ !!
ಅವಳು ಹಿಡಿದಳು ಇವನ ಕರ !!!
ಅವತ್ತೇ ಇವನಾದ ಹರೋ ಹರ !!!

* * * * *
_____________________________________________________________

ಮನಸ ಕದ್ದೆ

ಎಂದ ನಿ ನನ್ನ ಮನಸ ಕದ್ದೆ !
ಅವತ್ತೇ ನಾ ನಿನ್ನ ಪ್ರೆಮದಾಗ ಬಿದ್ದೆ !!
ಹಾರೆ ಹೋತು ನನ್ನ ನಿದ್ದೆ !!!
ನನ್ನ ಪ್ರೀತಿ ನೀ ಕಾಲಿನಿಂದ ಒದ್ದೆ !!!
ಅವತ್ತಿಂದ ನನ್ನ ಕಣ್ಣೆಲ್ಲ ಬರಿ ಒದ್ದೆ , ಒದ್ದೆ , ಒದ್ದೆ !!!!
* * * * *
______________________________________________________________
ನಲ್ಲ
ನನಗೆ ಗೊತ್ತು ಗೆಳತಿ ನಿನ್ನ ಮನಸ್ಸಿನಲ್ಲಿ ನಾನಿಲ್ಲ !
ಅಲ್ಲಿರುವದು
ಕೇವಲ ನಿನ್ನ ನಲ್ಲ !!

ಅವನೇ ನಾ ? 'ನಲ್ಲ' !!!
* * * * *
______________________________________________________________

ನೆನಪುಗಳು
ಗೆಳತಿ ನಿನ್ನ ನೆನಪುಗಳೇ ಹಾಗೆ !
ಮಿಂಚಿ ಮಾಯವಾಗುವ ಮಿಂಚಿನ ಹಾಗೆ !!
ಸಮುದ್ರದ ದಡದ ಮೇಲೆ ಮತ್ತೆ ಮತ್ತೆ ಬೀಳುವ ತೆರೆ ಹಾಗೆ !!!
ಟಿ.ವಿ ನೋಡುವಾಗ ಕಾಡುವ ಜಾಹಿರಾತಿನ ಹಾಗೆ !!!!

* * * * *
______________________________________________________________
ಜೀವನವೊಂದು ಜೋಕಾಲಿ
ಜಿವನವೊಂದು ಜೋಕಾಲಿ !
ಜೀಕ ಬೇಡಲೋ ನೀ ಬರಿ ಕಾಲಿ !!!

ಇರಲಿ ಸ್ವಲ್ಪ ಪೋಲಿ !!!
ಆದರೆ ಸ್ವಲ್ಪವೂ ಹೋಗದಿರಲಿ ಜೋಲಿ !!!!
ಆವಾಗಲೇ ಜೀವನಕ್ಕೊಂದು ಅರ್ಥ ಅದ ನೀ ಕಲಿ !!!!!
* * * * *
______________________________________________________________
ಆವಳು ಬಲು ಚಂದ
ಅವಳು ಬಲು ಚಂದ !
ಸೂರ್ಯನು ಅವಳ ಮುಂದೆ ಮಂದ !!
ನೋಡ ಬೇಡಲೋ ನೀ ಅವಳ ಬರಿ ಗಣ್ಣಿನಿಂದ !!!
ಸುಟ್ಟು ಬಿಟ್ಟಾಳು ನಿನ್ನ, ತನ್ನ ವಾರೆ ನೋಟದಿಂದ !!!!
* * * * *
___________________________________________________________________
ಐಶ್ವರ್ಯ ರೈ
ನನ್ನವಳು ನೋಡೋದಕ್ಕೆ ಶುದ್ದ
ಐಶ್ವರ್ಯ ರೈ!
ನನ್ನವಳು ನೋಡೋದಕ್ಕೆ ಶುದ್ದ ಐಶ್ವರ್ಯ ರೈ!!
ಅದಕ್ಕೆ ಇರಬೇಕು ಅವಳು ಬಲು ಬೇಗ ಕೊಟ್ಟಳು ಕೈ!!!

* * * * *

__________________________________________________________________________
ನನ್ನವಳು
ನನ್ನವಳು ಮೊದ ಮೊದಲು ಕಾಣಿಸುತ್ತಿದ್ದಳು
ತುಂಬ ಸ್ಲಿಮ್ !
ಈಗ ಕಾಣಿಸುತ್ತಿದ್ದಾಳೆ ದೊಡ್ಡ ಡ್ರಮ್ !!
* * * * *







Friday, July 3, 2009

ಸ್ನೇಹಕ್ಕಾಗಿ

ಸ್ನೇಹಿತರೆ,
ನನ್ನ ಹೆಸರು ಮಂಜು ತಳ್ಳಿಹಾಳ, ಸ್ನೇಹಕ್ಕಾಗಿ ಇದು ನನ್ನ ಹೊಸ ಬ್ಲಾಗ್
ನನ್ನ ಸ್ನೇಹಿತ ಶಿವಶಂಕರ ವಿಷ್ಣು ಯಳವತ್ತಿ ಸಹಾಯದಿಂದ ಸಾಹಸ ಕಾರ್ಯಕ್ಕೆ ಕೈ ಹಾಕಿದ್ದೇನೆ,ಇನ್ನು ಮುಂದೆ ಹೊಸ ಹೊಸ ಬರಹಗಳಿಗಾಗಿ ಬೇಟಿ ಮಾಡುತ್ತಿರಿ.


ಇಂತಿ ನಿಮ್ಮ ಸ್ನೇಹಿತ
ಮಂಜು ತಳ್ಳಿಹಾಳ