ಸ್ನೇಹಕ್ಕಾಗಿ...........,,,,,,,,,,,

Thursday, November 26, 2009

ನಾಳೆಯ ಚಿಂತೆಯಲ್ಲಿ .....,,,,,,,,

ಎವರಿ ಡಾಗ್ ಹ್ಯಾಸ್ ಇಟ್ಸ ಓನ್ ಡೇ


ಎವರಿ ಡೇ ಇಸ್ ನಾಟ್ ಎ ಸಂಡೆ


ಎಂಬಿತ್ಯಾದಿ ವಾಕ್ಯಗಳು ಮನುಷ್ಯನಿಗೆ ಮುಂದೊಂದು ದಿನ ಒಳ್ಳೆಯ ದಿನ ಬರುತ್ತದೆ ಅನ್ನುವುದನ್ನು ಸಾರಿ ಹೇಳುತ್ತವೆ


ಆದರೆ ಮನುಷ್ಯನು ನಾಳೆ ಬರುವ ಆ ಹುಸಿ ಒಳ್ಳೆಯ ದಿನಕ್ಕಾಗಿ ಕಾಯುತ್ತಾ ತಾನಿರುವ ಸದ್ಯದ ದಿನವನ್ನು ಬರೀ ನಾಳೆಯ


ಚಿಂತೆಯಲ್ಲಿಯೇ ಹಾಳು ಮಾಡಿಕೊಳ್ಳುತ್ತಿರುವುದು ಮಾತ್ರ ದೂರಾದೃಷ್ಟಕರ, ನಾಳೆಯ ಚಿಂತೆ ಮಾಡುವುದಕ್ಕಿಂತ


ಇಂದಿನ ಆ ಉತ್ತಮವಾದ ಗಳಿಗೆಯನ್ನು ಉಪಯೋಗಿಸಿಕೊಳ್ಳುವುದು ಮಾತ್ರ ಸತ್ಯ ಸಂಗತಿ. ಏನಂತಿರಿ?????


5 comments:

 1. ಮಂಜುನಾಥ ಸರ್..
  ಅದಕ್ಕೆ ಅಲ್ವೇ ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ ಅಂತ ಹೇಳೋದು... ನಿಮ್ಮ ಅನಿಸಿಕೆಗಳು ನೂರಕ್ಕೆ ನೂರು ಸತ್ಯ..

  ReplyDelete
 2. ಮಂಜುನಾಥ್ ನಿಮ್ಮ ಮಾತು ನಿಜ..ಅದ್ರಲ್ಲೂ ಈ ೨೦೧೨ ಅನ್ನೋ ಭೂತ ಬಂದಮೇಲೆ ಹಲವರು ನನ್ನನ್ನೂ ಕೇಳಿದರು..scientist ನೀವು ಇದರ ಬಗ್ಗೆ ಏನು ಹೇಳ್ತೀರಾ? ಅಂತ..ಅದಕ್ಕೆ ಉತ್ತರವಾಗಿ ನನ್ನ ಬ್ಲಾಗ್ ನಲ್ಲಿ ಒಂದು ಲೇಖನ ಬರೆದೆ..ನೋಡಿ ನೀವೂ..

  ReplyDelete
 3. ಆತ್ಮೀಯ ಮಂಜು,

  ನನ್ನ ದೃಷ್ಟಿಯಲ್ಲಿ ನಾಳೆಯ ಒಳ್ಳೆಯ ದಿನಕ್ಕಾಗಿ ಕಾಯುವುದು ದುರಾದೃಷ್ಟಕರವಲ್ಲ. ನಮ್ಮ ಜೀವನದಲ್ಲಿ ನಿನ್ನೆ ಅನ್ನುವುದು ಕಲಿಕೆ, ಇಂದು ಅನ್ನುವುದು ಪರೀಕ್ಷೆ ಹಾಗೂ ನಾಳೆ ಅನ್ನುವುದು ನಮ್ಮ ಗೆಲವು. ನಮ್ಮ ಗೆಲುವಿಗಾಗಿ ಕಾಯುವುದು ಹೇಗೆ ತಾನೇ ದುರಾದೃಷ್ಟ. ನಾವು ಇಂದು ಯಾವ ರೀತಿ ಪರೀಕ್ಷೆ ನೀಡಿರುತ್ತೇವೆಯೋ ಅದಕ್ಕೆ ತಕ್ಕ ಪರಿಣಾಮವನ್ನು ನಾವು ನೋಡಬೇಕಲ್ಲವೇ? ಆಗಲೇ ತಾನೇ ನಾವು ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳ ಅರಿವಾಗುವುದು. ನಿಜ ಹೇಳಬೇಕೆಂದರೆ, ನಮ್ಮ ಬದುಕಿನಲ್ಲಿ ಬರುವುದು ಕೇವಲ ದಿನಗಳು ಮಾತ್ರ ಆದರೆ, ನಾವು ಆ ದಿನಗಳಿಗೆ ಕೆಟ್ಟ ದಿನಗಳು ಮತ್ತು ಒಳ್ಳೆಯ ದಿನಗಳೆಂದು ಹೆಸರಿಡುತ್ತೇವೆ. ಮನುಷ್ಯ ತನ್ನ ಜೀವನದಲ್ಲಿ ಒಳ್ಳೆಯ ಕಾಲಕ್ಕಾಗಿ ಕಾಯಬಾರದು. ಆದರೆ, ಎಲ್ಲ ದಿನಗಳನ್ನು ಒಳ್ಳೆಯದಾಗಿಸಿಕೊಳ್ಳುವುದನ್ನು ಕಲಿಯಬೇಕು. ನಮ್ಮ ಜೀವನದಲ್ಲಿ ನಾವು ಎಂದು ಎಚ್ಚರಗೊಳ್ಳುತ್ತೇವೆಯೋ ,ಅದು ನಮ್ಮ ಬದುಕಿನ ಗಡಿಯಾರ ನೀಡಿದ ಎಚ್ಚರಿಕೆಯ ಘಂಟೆ ಅದು ಇಂದು ಬರಬಹುದು ನಾಳೆಯೂ ಬರಬಹುದು ಆಗಲೇ ನಾವು ನಮ್ಮ ಜೀವನದಲ್ಲಿ ತಿರುವುಗಳನ್ನು ಪಡೆಯಬಹುದು.

  ಏನಂತೀರಿ.

  ReplyDelete

ನಿಮ್ಮ ಅನಿಸಿಕೆಯನ್ನು ಇಲ್ಲಿ ಬರಿರೀ,