ಸ್ನೇಹಕ್ಕಾಗಿ...........,,,,,,,,,,,

Saturday, July 4, 2009

ಸ್ನೇಹಿತರೇ, ನನ್ನಕೆಲವುಚುಟುಕುಗಳು ನಿಮಗಾಗಿ,,,,,,
ಸ್ನೇಹಿತರೇ,

ನನ್ನ ಕೆಲವು ಚುಟುಕುಗಳು ನಿಮಗಾಗಿ,,,,,,

ತನು - ಮನ
ಅವಳೆಂದಳು
ಪ್ರಿಯಾ, ಬೆರೆಯಲಿಲ್ಲವೇಕೆ
ನನ್ನ ನಿನ್ನ ತನು - ಮನ ?

ಅವನೆಂದ

ಪ್ರಿಯೇ, ಕೊಡಲಿಲ್ಲ ನಿಮ್ಮಪ್ಪ

ನನ್ನ ವರದಕ್ಷಿಣೆ ಹಣ !!

* * * * *
_____________________________________________________________
ನಗ - ಭರ
ಜೋಡಿ ಎತ್ತುಗಳಿಗೂ 'ನೊಗ' ಭಾರ !
ನನ್ನವಳಿಗೆ ನಾನೆಷ್ಟು ಕೊಡಿಸಿದರು ನಗ 'ಬರ' !!

* * * * *
____________________________________________________________
ಸಂಸ್ಕಾರ
ಬಿತ್ತಿದ್ದೇ ಬೇವು !
ಬೇಕೆಂದರೆ ಹೇಗೆ ಮಾವು !!
ಸಹಿಸಿಕೊಳ್ಳಲೇ ಬೇಕು ತಾವು !!!
ಬರುವ ವರೆಗೂ ಸಾವು !!!!
* * * * *
_____________________________________________________________
ಮುಂದ ?
ಅವಳು ನೋಡಿದ ಮೇಲೆ ನನ್ನ ಅಂದ !
ಬಿದ್ದಳು ನನ್ನ ಹಿಂದ !!
ಸದ್ದಿಲ್ಲದೆ ಆಯಿತೊಂದು ಕಂದ !!!
ಮುಂದ ?
ಈಗ ನಾನು ಅವಳ ಹಿಂದ !!!!

* * * * *
_____________________________________________________________
ಮನೋಹರ
ಅವಳು ಮನೋಹರಿ !
ಇವನು ಮನೋಹರ !!
ಅವಳು ಹಿಡಿದಳು ಇವನ ಕರ !!!
ಅವತ್ತೇ ಇವನಾದ ಹರೋ ಹರ !!!

* * * * *
_____________________________________________________________

ಮನಸ ಕದ್ದೆ

ಎಂದ ನಿ ನನ್ನ ಮನಸ ಕದ್ದೆ !
ಅವತ್ತೇ ನಾ ನಿನ್ನ ಪ್ರೆಮದಾಗ ಬಿದ್ದೆ !!
ಹಾರೆ ಹೋತು ನನ್ನ ನಿದ್ದೆ !!!
ನನ್ನ ಪ್ರೀತಿ ನೀ ಕಾಲಿನಿಂದ ಒದ್ದೆ !!!
ಅವತ್ತಿಂದ ನನ್ನ ಕಣ್ಣೆಲ್ಲ ಬರಿ ಒದ್ದೆ , ಒದ್ದೆ , ಒದ್ದೆ !!!!
* * * * *
______________________________________________________________
ನಲ್ಲ
ನನಗೆ ಗೊತ್ತು ಗೆಳತಿ ನಿನ್ನ ಮನಸ್ಸಿನಲ್ಲಿ ನಾನಿಲ್ಲ !
ಅಲ್ಲಿರುವದು
ಕೇವಲ ನಿನ್ನ ನಲ್ಲ !!

ಅವನೇ ನಾ ? 'ನಲ್ಲ' !!!
* * * * *
______________________________________________________________

ನೆನಪುಗಳು
ಗೆಳತಿ ನಿನ್ನ ನೆನಪುಗಳೇ ಹಾಗೆ !
ಮಿಂಚಿ ಮಾಯವಾಗುವ ಮಿಂಚಿನ ಹಾಗೆ !!
ಸಮುದ್ರದ ದಡದ ಮೇಲೆ ಮತ್ತೆ ಮತ್ತೆ ಬೀಳುವ ತೆರೆ ಹಾಗೆ !!!
ಟಿ.ವಿ ನೋಡುವಾಗ ಕಾಡುವ ಜಾಹಿರಾತಿನ ಹಾಗೆ !!!!

* * * * *
______________________________________________________________
ಜೀವನವೊಂದು ಜೋಕಾಲಿ
ಜಿವನವೊಂದು ಜೋಕಾಲಿ !
ಜೀಕ ಬೇಡಲೋ ನೀ ಬರಿ ಕಾಲಿ !!!

ಇರಲಿ ಸ್ವಲ್ಪ ಪೋಲಿ !!!
ಆದರೆ ಸ್ವಲ್ಪವೂ ಹೋಗದಿರಲಿ ಜೋಲಿ !!!!
ಆವಾಗಲೇ ಜೀವನಕ್ಕೊಂದು ಅರ್ಥ ಅದ ನೀ ಕಲಿ !!!!!
* * * * *
______________________________________________________________
ಆವಳು ಬಲು ಚಂದ
ಅವಳು ಬಲು ಚಂದ !
ಸೂರ್ಯನು ಅವಳ ಮುಂದೆ ಮಂದ !!
ನೋಡ ಬೇಡಲೋ ನೀ ಅವಳ ಬರಿ ಗಣ್ಣಿನಿಂದ !!!
ಸುಟ್ಟು ಬಿಟ್ಟಾಳು ನಿನ್ನ, ತನ್ನ ವಾರೆ ನೋಟದಿಂದ !!!!
* * * * *
___________________________________________________________________
ಐಶ್ವರ್ಯ ರೈ
ನನ್ನವಳು ನೋಡೋದಕ್ಕೆ ಶುದ್ದ
ಐಶ್ವರ್ಯ ರೈ!
ನನ್ನವಳು ನೋಡೋದಕ್ಕೆ ಶುದ್ದ ಐಶ್ವರ್ಯ ರೈ!!
ಅದಕ್ಕೆ ಇರಬೇಕು ಅವಳು ಬಲು ಬೇಗ ಕೊಟ್ಟಳು ಕೈ!!!

* * * * *

__________________________________________________________________________
ನನ್ನವಳು
ನನ್ನವಳು ಮೊದ ಮೊದಲು ಕಾಣಿಸುತ್ತಿದ್ದಳು
ತುಂಬ ಸ್ಲಿಮ್ !
ಈಗ ಕಾಣಿಸುತ್ತಿದ್ದಾಳೆ ದೊಡ್ಡ ಡ್ರಮ್ !!
* * * * *5 comments:

 1. ಐಶ್ವರ್ಯಾ ಚುಟುಕು ಓದಿ ನಗು ಬಂತು...

  ಇಂತವು ಇದ್ರೆ, ಬೇಗ ಹಾಕು ಮಂಜು...

  ಇಂತಿ ನಿಮ್ಮ ಪ್ರೀತಿಯ,
  ಶಿವಶಂಕರ ವಿಷ್ಣು ಯಳವತ್ತಿ

  ReplyDelete
 2. ಮಂಜು, ಚುಟುಕು ಕೆಲವೆಡೆ ತಲೆಗೆ ಮೊಟಕಿದರೆ, ಕೆಲವೆಡೆ ತಲೆಯೊಳಗಿನದನ್ನು ಮೊಟಕುತಿವೆ...ಚುಟುಕಗಳು ಮಾಯ (ಬ್ಲಾಗುಗಳಲ್ಲಿ) ಆಗುತ್ತಿವೆ..ನಿಮ್ಮ ಆಗಮನ ನಮಗೆ ಹಿತ್ವೆನಿಸುತ್ತಿದೆ..
  ನನ್ನ ಬ್ಲಾಗ್ ಗೆ ಬಂದಿರಿ ಪ್ರತಿಕ್ರಿಯಿಸಿದಿರಿ ಧನ್ಯವಾದ...ನನ್ನ ಜಲನಯನಕ್ಕಊ ಒಮ್ಮೆ ಭೇಟಿ ಕೊಡಿ

  ReplyDelete
 3. ಮಂಜುನಾಥ್ ಸರ್,

  ಚುಟುಕುಗಳು ಚೆನ್ನಾಗಿವೆ. ಕೆಲವಂತೂ ತುಂಬಾ ನಗೆ ತರಿಸಿದವು...ಇನ್ನಷ್ಟು ಬರೆಯಿರಿ....

  ಮತ್ತೆ ಬಿಡುವಾದಾಗ ನನ್ನ ಬ್ಲಾಗಿಗೂ ಬೇಟಿಕೊಡಿ.
  http://chaayakannadi.blogspot.com/

  ReplyDelete
 4. ತುಂಬಾ ಚೆನ್ನಾಗಿವೆ ಕವನಗಳು ...especially ಐಶ್ವರ್ಯ ರೈ ಬಗೆಗಿನ ಕವನ

  ReplyDelete

ನಿಮ್ಮ ಅನಿಸಿಕೆಯನ್ನು ಇಲ್ಲಿ ಬರಿರೀ,