ಮನುಷ್ಯನ ಆಶೆಗಳಿಗೆ ಮಿತಿಯೇ ಇಲ್ಲ ತನ್ನ ನಿತ್ಯ ಜೀವನದಲ್ಲಿ ಅವನಿಗೆ ಬೇಕಾದ ಮೂಲ ಭೂತ ಸೌಕಯಗಳು ದೊರೆತರು ಉತ್ತವಾದ ಜೀವನವನ್ನು ಸಾಗಿಸಲಿಕ್ಕೆ ಅವನು ಮಾಡುವ ಆಶೆಗಳು ಸಾವಿರಾರು, ಊಟ ಸಿಕ್ಕರೆ, ಉತ್ತಮವಾದ ಮನೆ ಹೊಂದುವ ಆಶೆ, ಮನೆ ಸಿಕ್ಕರೆ, ಒಳ್ಳೆಯ ಕೆಲಸ ಹೊಂದುವ ಆಶೆ, ಕೆಲಸ ಸಿಕ್ಕರೆ, ಕಾರು , ಕಾರು ಸಿಕ್ಕರೆ, ???? ಹೀಗೆ ಅವನ ಆಶೆ ಬೆಳೆಯುತ್ತಾ ಸಾಗುತ್ತದೆ. ತನ್ನ ಆಶೆಗಳ ಇಡೆರಿಕೆಗಾಗಿ ಆತ ಬೇರೆ ಬೇರೆ ಅಪಾಯಗಳನ್ನು ಏದುರಿಸುತ್ತಾನೆ, ಬೇರೆ ಬೇರೆ ಉಪಾಯಗಳನ್ನು ಮಾಡುತ್ತಾನೆ. ಈ ಮಧ್ಯೆ ಧನ,ಮಾನ,ಸಮಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಇಷ್ಟೆಲ್ಲ ಮಾಡಿದಾಗ ಅವನ ಆಶೆಗಳು ಇಡೆರಿದರೂ ಕೂಡ ಮುಂದೆ ಅವನ ಹೊಸ ಆಶೆಗಳ ಪಟ್ಟಿ ಅಲ್ಲಿಂದಲೇ ಪ್ರಾರಂಬವಾಗುತ್ತದೆ ಅದಕ್ಕೆ ಇರಬೇಕು ಗೌತಮ ಬುದ್ದ ಹೇಳಿದ್ದು``ಆಶೆಯೇ ದುಖಃಕ್ಕೆ ಮೂಲ`` ಎಂದು ಮನುಷ್ಯನಿಗೆ ಆಶೆಗಳಿರಬೇಕು ಆದರೆ ಅದು ಅತಿ ಆಶೆಯಾಗಬಾರದು ತನ್ನಲ್ಲಿರುವುದನ್ನು ಹಂಚಿ ಮತ್ತೋಬ್ಬರಿಗೆ ಸಹಾಯ ಮಾಡುವುದು ಮನುಷ್ಯ ಮುಖ್ಯ ಗುಣವಾಗಬೇಕು ಆವಾಗ ಮಾತ್ರ ಈ ಸಮಾಜಕ್ಕೆ ನಾವೋಬ್ಬ ಒಳ್ಳೆಯ ಪ್ರಜೆಗಳಾಗಲಿಕ್ಕೆ ಸಾದ್ಯ ಎಲ್ಲರೊಂದಿಗೆ ಪ್ರತಿ ವಿಶ್ವಾಸದಿಂದಿರಬೇಕು , ಪ್ರತಿಯೊಬ್ಬರನ್ನು ಗೌರವಿಸಬೇಕು ಆವಾಗ ಮಾತ್ರ ಒಂದು ಉತ್ತಮವಾದ ಸಮಾಜ ಕಟ್ಟಲು ಸಾದ್ಯ ಏನಂತಿರಿ???.
Ture...! But one has to pay more if he starts alone...!
ReplyDelete